ನಾಳೆ ಡಿಸೆಂಬರ್ 29 . ನಮ್ಮ ನೆಚ್ಚಿನ ಕುವೆಂಪು ಅವರ ಜನ್ಮದಿನ . ಈ ಸುದಿನದಂದು ಕುವೆಂಪು ಅವರ ಒಂದು ಘಟನೆ ನೆನಪು ಮಾಡಿಕೊಳ್ಳುವ ಚಿಕ್ಕ ಪ್ರಯತ್ನ. ಕುವೆಂಪುರವರು ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಸ್ವಾಗತ ಭಾಷಣಕಾರರು " ಕುವೆಂಪುರವರು ಇಲ್ಲಿ ಹುಟ್ಟದೆ ಇನ್ನೆಲ್ಲಿಯಾದರೂ ಹುಟ್ಟಿದ್ದರೆ ಸಾಮಾಜಿಕವಾಗಿ ,ರಾಜಕೀಯವಾಗಿ , ಆರ್ಥಿಕವಾಗಿ ಅವರ ಸ್ಥಾನಮಾನ ಇನ್ನೂ ಉತ್ತಮವಾಗಿರುತಿತ್ತು " ಎಂದು ಪ್ರಸ್ತಾಪಿಸಿದ್ದರು . ಕುವೆಂಪುರವರು ಅದಕ್ಕೆ ಉತ್ತರಿಸುತ್ತ " ಅವರ ದ್ರಷ್ಟಿಯಲ್ಲಿ ಜೀವನದ ಅದರ್ಶವೆಂದೆರೆ ಏನಂದು ನನಗೆ ತಿಳಿಯದು . ನಾನು ಇಲ್ಲಿ ಹುಟ್ಟದೆ , ಇಲ್ಲಿ ಇರದೇ , ಬೇರೆ ಕಡೆ ಹುಟ್ಟಿದ್ದರೆ , ಬದುಕಿದ್ದರೆ , ಇದಕ್ಕಿಂತ ಉತ್ತಮ ಸ್ಥಾನ ದೊರೆಯುತ್ತಿರಲಿಲ್ಲ . ನನಗೆ ಇಲ್ಲಿ ಈಗ ಏನು ದೊರೆತಿದೆಯೋ ಅದು ಇನ್ನೆಲ್ಲಿಯೂ ದೊರೆಯದು . ಪೇಚಾಟ , ಅಲೆದಾಟ ಎಲ್ಲೆಲ್ಲಿಯೂ ಇದೆ ; ವ್ಯಕ್ತಿಯಲ್ಲಿದೆ ; ಜನಾಂಗ ಜನಾಂಗದಲ್ಲಿದೆ . ಇದಕ್ಕೆ ಅತೃಪ್ತಿ, ಅಹಂಕಾರ ಮತ್ತು ಪ್ರತಿಷ್ಠಾಮೂಲವಾದ ಸ್ಪರ್ಧೆಗಳೇ ಕಾರಣ .ಇವು ಒಳಗಡೆ ಸೇರಿಬಿಟ್ಟರೆ , ಎಲ್ಲಿರಲಿ , ಏನೇ ಸ್ಥಾನಮಾನ ಇರಲಿ , ತೃಪ್ತಿ ಎಂದೆಂದಿಗೂ ಲಭಿಸುವುದಿಲ್ಲ . ಕನ್ನಡ ಕವನಗಳ ತುತ್ತೂರಿ ಲಂಡನ್ ತನಕ , ಹವಾಯ್ ದ್ವೀಪಗಳ ತನಕ ಹೋಗುವುದು ಬೇಡ . ಅವನ್ನು ಇಲ್ಲಿಯವರು ನಮ್ಮ ಸುತ್ತಮುತ್ತಣದವರು ಓದಿ ಸಂತೋಷಪಡಲಿ ,ಆಗ ಬರೆದವನಿಗೆ ಸಂತೋಷವಾಗುತ್ತದೆ ಜೀವನ ಸಾರ್ಥಕವಾಗುತ್ತದೆ " ಎಂದರಂತೆ .
ಮುಗಿಸುವ ಮುನ್ನ ಕುವೆಂಪು ವಿರಚಿತ ಪದ್ಯವೊಂದರ ಸಾಲು
ಅದರರ್ಥಗಿರ್ಥಗಳು ಸ್ರಷ್ಟಿಕರ್ಥನಿಗಿರಲಿ
ವ್ಯರ್ಥ ಜಿಜ್ನಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮ್ಯೆತ್ರಿ
ಎಷ್ಟು ಸತ್ಯವಾದ ಮಾತು, ಅರ್ಥವತ್ತಾದ ಸಾಲುಗಳು.. ಕುವೆಂಪು ಅವರಿಗೂ, ನಿಮಗೂ ಧನ್ಯವಾದಗಳು..
ReplyDeleteಕೃಷ್ಣಪ್ರಸಾದ್ ಹಂಡೇಸರ್ ರವರೇ ಕುವೆಂಪು ರವರ ಲೇಖನ ಅರ್ಥಪೂರ್ಣ ವಾಗಿದೆ.ಧನ್ಯವಾದಗಳು. ತಾವು ಜ್ಯೋತಿಯವರ ಬ್ಲಾಗ್ ಗೆ ಕಳಿಸುತ್ತಿರುವುದು, ನಮ್ಮ ಮೇಲ್ ಗೆ ಬರುತ್ತಿದೆ.ನಮ್ಮ ಬ್ಲಾಗ್ ಗು ಭೇಟಿ ನೀಡಿ ....ನಮಸ್ಕಾರ
ReplyDelete